ʻವಿಪ್ರವಾರ್ತೆʼ ನಿಮ್ಮ ಧ್ವನಿ, ನಿಮ್ಮ ವೇದಿಕೆ `ವಿಪ್ರವಾರ್ತೆ' ಎಂಬ ಹೆಸರು ಕೇಳಿದ ಕ್ಷಣದಲ್ಲಿ ಎರಡು ಪ್ರಶ್ನೆಗಳು ತಕ್ಷಣ ಉದ್ಭವಿಸಬಹುದು –
೧. ಇದು ಬ್ರಾಹ್ಮಣ ಸಮಾಜಕ್ಕೆ ಸಂಬಂಧಿಸಿದ ಸುದ್ದಿಗಳಿಗೆ ಮಾತ್ರ ಸೀಮಿತವಾದ ಪೋರ್ಟಲ್‌ವೇ?
೨. ಈಗಾಗಲೇ ಸಾವಿರಾರು ಸುದ್ದಿ ಏಜೆನ್ಸಿಗಳು, ನೂರಾರು ಟಿವಿ ಚಾನೆಲ್‌ಗಳು, ಪತ್ರಿಕೆಗಳು, ಸಾವಿರಾರು ವೆಬ್‌ಸೈಟ್‌ಗಳು ಇರುವಾಗ, ಇನ್ನೊಂದು ಪ್ರತ್ಯೇಕ ʻವಿಪ್ರ ನ್ಯೂಸ್ʼ ಪೋರ್ಟಲ್‌ ಬೇಕೆ?

ಈ ಪ್ರಶ್ನೆಗಳು ನಿಜಕ್ಕೂ ಸೂಕ್ತವಾದವು. ಆದರೆ ಅದಕ್ಕೆ ಉತ್ತರವು ಸ್ಪಷ್ಟವಾಗಿದೆ. ಇಂದಿನ ಮಾಧ್ಯಮ ಜಗತ್ತಿನಲ್ಲಿ ಪೂರ್ಣಪ್ರಮಾಣದಲ್ಲಿ ಸಮಗ್ರವಾಗಿ ಬ್ರಾಹ್ಮಣ ಸಮುದಾಯವನ್ನು ಪ್ರತಿನಿಧಿಸುವ ಮಾಧ್ಯಮವಿಲ್ಲ. ಕೆಲವು ತ್ರಿಮತಸ್ಥ ಮಠಗಳಿಗೆ, ತಮ್ಮ ತಮ್ಮ ಮತಕ್ಕೆ ಅಥವಾ ಆಯಾ ಕ್ಷೇತ್ರಗಳಿಗೆ ಸೀಮಿತವಾಗಿವೆ. ಇದು ನಮ್ಮವರ ಬಹುತೇಕ ಅಭಿಪ್ರಾಯಗಳು, ಸಮಸ್ಯೆಗಳು, ಸಮಾಜದ ಒಳಗಿನ ಅಂತರಂಗದ ವಿಚಾರಗಳು ಬಹುಪಾಲು ಅನುರಣಿತವಾಗದೇ ಉಳಿದಿವೆ. ನಮ್ಮೊಳಗಿನ ಚಿಂತನೆಗಳು, ಚರ್ಚೆಗಳು, ನಮ್ಮವರ ಸಾಧನೆಗಳೆ ನಮಗೆ ಶಕ್ತಿ – ಆ ಶಕ್ತಿಯನ್ನು ಒಂದು ಮಾಡಬಲ್ಲ ಒಂದು ಸಮಗ್ರ ವೇದಿಕೆ ಅಗತ್ಯವಿದೆ, ಎಂಬ ಬಲವಾದ ನಂಬಿಕೆ ಬಹಳ ದಿನಗಳಲ್ಲಿ, ಸಾಕಷ್ಟು ವೇದಿಕೆಗಳಲ್ಲಿ ಕೇಳಿಬರುತ್ತಿತ್ತು. ಈ ಅವಶ್ಯಕತೆಯಿಂದಲೇ ಸಮಾನಮನಸ್ಕರು ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ವಿಪ್ರರು ಸೇರಿಕೊಂಡ 'ವಿಕಾಸ' ಸಂಘಟನೆ ಒಂದು ದಿಟ್ಟ ಹೆಜ್ಜೆಯಿಟ್ಟಿದೆ. ವಿಕಾಸ ಸಂಘಟನೆಯ ಮೇಲ್ವಿಚಾರಣೆಯಲ್ಲಿ `ವಿಪ್ರ ವಾರ್ತೆ' ಎಂಬ ವಿನೂತನ ತಂತ್ರಜ್ಞಾನಗಳುಳ್ಳ ಡಿಜಿಟಲ್‌ ಮಾಧ್ಯಮವನ್ನು ಆರಂಭಿಸಿದ್ದೇವೆ. ಇದು ನಿಮ್ಮ ಧ್ವನಿ – ಸಮಸ್ತ ತ್ರಿಮತಸ್ಥ ಬ್ರಾಹ್ಮಣರ ಧ್ವನಿ.ಎಲ್ಲರೂ ಇಲ್ಲಿ ಆತ್ಮೀಯವಾಗಿ ಬೆರೆಯಬಲ್ಲೆವು.ಇಲ್ಲಿ ಸಂಪ್ರದಾಯವಿದೆ, ತಂತ್ರಜ್ಞಾನವೂ ಇದೆ, ಧರ್ಮವಿದೆ, ದಿಶೆಯೂ ಇದೆ.ಸಂಸ್ಕೃತಿಯ ಜೊತೆ ವಿಜ್ಞಾನವನ್ನೂ ಬೆಸೆದು ಬೆಳೆಸುವ ಸಮಕಾಲೀನ ಪ್ರಯತ್ನವಿದು. ಇದು ಸಾಮಾನ್ಯ ಪೋರ್ಟಲ್‌ಗಳಂತಲ್ಲ – ವಿಶಿಷ್ಟವೂ ವಿಭಿನ್ನವೂ ಆಗಿರುವ`ವಿಪ್ರವಾರ್ತೆ'ಯನ್ನು ಬೆಳೆಸುವುದು, ಉಳಿಸುವುದು, ಉಪಯೋಗಿಸುವ ಜವಾಬ್ದಾರಿ ನಮ್ಮೆಲ್ಲರಿಗೂ ಇದೆ.

'Vipravarte' – Your Voice, Your Platform. The moment you hear the name 'Vipravarte', two questions may arise immediately –
1. Is this a portal limited only to news related to the Brahmin community?
2. With thousands of news agencies, hundreds of TV channels, newspapers, and thousands of websites already existing, why do we need another exclusive 'Vipra News' portal?

These questions are indeed valid. But the answer is clear. In today's media world, there is no platform that comprehensively represents the Brahmin community. Some mutts are limited to their own sects or regions. As a result, most of our opinions, problems, and inner community matters remain unheard. Our thoughts, discussions, and achievements are our strength – and there is a strong belief, echoed in many forums over the years, that we need a unified platform to bring this strength together.
It is from this need that like-minded and media-active Vipras have come together to form the 'Vikaasa' organization, taking a bold step forward. Under the supervision of the Vikaasa organization, we have launched 'Vipravarte', a unique digital media platform equipped with innovative technology.
This is your voice – the voice of all Trimatastha Brahmins. Everyone can come together here with warmth. Here, there is tradition, technology, religion, and direction. This is a contemporary effort to blend science with culture and nurture it.
This is not just another portal – it is a unique and distinct 'Vipravarte' that we all have the responsibility to grow, preserve, and utilize.